ನಮ್ಮ ಶ್ರೀಮಠ ರಾವೂರ, ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನಮಠವೂ ಕಲ್ಯಾಣ ಕರ್ನಾಟಕದ ಶರಣ ಸಂಸ್ಕೃತಿಯ ಪಾವನ, ತಾಳ, ಶ್ರೀಮಠಕ್ಕೆ 5 ಶತಮಾನಗಳ ಭವ್ಯ ಪರಂಪರೆ ಇದೆ. ಗುರು ಬಸವಣ್ಣನವರ ಲಿಂಗಾಯತ ಧರ್ಮದ ವಚನ ಸಾಹಿತ್ಯದ 2ನೇ ಕಾಲಘಟ್ಟವನ್ನು ಮುನ್ನಡೆಸಿದ ಯತಿಕುಲತಿಲಕ' ಯಡೆಯೂರು ಶ್ರೀ ಜಗದ್ಗುರು ತೋಂಟದ ಸಿದ್ದಲಿಂಗೇಶ್ವರರ ತಪೋತಾಣ ನಮ್ಮ ಶ್ರೀಮಠ, ಕರ್ತೃ ಶ್ರೀ ಸಿದ್ದಲಿಂಗೇಶ್ವರರ ನಂತರ 12: ಪೂಜ್ಯರು ಮಠವನ್ನು ಮುನ್ನಡೆಸಿದ್ದಾರೆ. 11ನೇ ಅಧಿಪತಿಗಳಾದ ಶ್ರೀ ಬೋಳಬಸವ ಸ್ವಾಮಿಗಳು ಶಾಖಾಮಠಗಳ ರಕ್ತಕೆ, ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯನ್ನು ತೆಲೆದು ಶ್ರೀಮಠವನ್ನು ಕಲ್ಯಾಣ ಕರ್ನಾಟಕದ ಸಿದ್ಧಗಂಗೆ' ಎಂಬ ಪ್ರಖ್ಯಾತಿಗೆ ಕಾರಕರಾದವರು, ''ಶೂನ್ಯ ಸಂಪಾದನೆಯ ಪರಾಮರ್ಶೆಯ ಕೃತಿ ಪಕ ಉಪಪಶಸ್ತಿ ಬರುವಲ್ಲಿ ಪೇರಣೆಯಾದವರು.
12ನೇ ಅಧಿಪತಿಗಳಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಭಕ್ತಾನುರಾಗಿಗಳು, ಶಿಕ್ಷಣಪ್ರೇಮಿಗಳು, ಪುಸ್ತಕ ಪ್ರಿಯರಾದ ಪರು, 25 ವರ್ಷಗಳವರೆಗೆ ಶ್ರೀಮತವನ್ನು ಮುನ್ನಡೆಸಿ, ಇತಿಹಾಸಕ್ಕೆ ಹೊನ್ನಕಿರೀಟವಾದವರು. ಮೊಜ್ವರ ಲಿಂಗೈ. ನಂತರ ಗದಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಿಯುಕ್ತಿಗೊಂಡವರೆ ನಮ್ಮ ಭರವಸೆಯ ಯುವತಿ ಶ್ರೀ ದೇವರು,
ವಿದ್ಯೆ ವಿನಯವನ್ನು ಮೈಗೂಡಿಸಿಕೊಂಡ ಸಾಧಕ ಶೇಷ್ಠರು, ಆಧ್ಯಾತ್ಮ ವಿದ್ಯಾಲಯ ಶ್ರೀ ಶಿವಯೋಗ ಮಂದಿರ, ಹುಬ್ಬಳ್ಳಿ ಮೂರುಸಾವಿರಮಠದಲ್ಲಿದ್ದು ವಚನಸಾಹಿತ್ಯ ಆಧ್ಯಯನ, ಆಧ್ಯಾತ್ಮ ಸಾಧನೆ, ಬೆಂಗಳೂರ ಸ್ವಾಮಿ ವಿವೇಕಾನಂದ ಯೋಗ ವಿದ್ಯಾಲಯದಲ್ಲಿ ನೌಕ ಪದವಿ ಪಡೆದ ಸಿದ್ದಲಿಂಗ ದೇವರು, ಪ್ರತಿಭಾನ್ವಿತ ಪ್ರವಚನಕಾರರಲ್ಲಿ ಒಬ್ಬರು. ಗ್ರಾಮಗಳಲ್ಲಿ ಜನಜಾಗೃತಿಪಾದಯಾತ್ರೆ, ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತು, ಸೌಹಾರ್ದ ಭಾವದಿಂದ ಸಂಸ್ಕಾರಗಳನ್ನು ಬಿತ್ತಿ, ಶ್ರೀದ ಜಾಗೃತಿ ಮೂಡಿಸಿ ಸಾಮಾನ್ಯರ ಸ್ವಾಮಿಗಳಾಗಿ, ಜನಮಾನಸದಲ್ಲಿ ಧನ್ಯತಾಭಾವ ಮೂಡಿಸಿದ್ದಾರೆ. ಕರ್ನಾಟಕದ ಬಹುಭಾಗಗಳಲ್ಲಿ ಪ್ರವಚನಗೈದ ಪೂಜ್ಯರು ಸತಪಾಧ್ಯಾಯಗಳು ಉತ್ತಮ ಬರಹಗಾರರು: ಶರಣ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವ
ReadMore...12ನೇ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು 25 ವರ್ಷಗಳವರೆಗೆ ಮಠದ ಘನಪರಂಪರೆಯನ್ನು ಮುನ್ನಡೆಸಿ ಧರ್ಮ ಸಂಸ್ಕಾರ ನೀಡಿ ಜನಮನದಲ್ಲಿ ನೆಲೆ ನಿಂತವರು. ಪೂಜ್ಯರು ದಿನಾಂಕ : 12-02-2020 ರಂದು ಲಿಂಗ ಬೆಳಗಿನಲ್ಲಿ ಬೆರೆತರು. ಶ್ರೀ ತೋಂಟದ ಸಿದ್ಧಲಿಂಗೇಶ್ವರ ಪರಂಪರೆಯ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾವೂರ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡವರು ಶ್ರೀ ಸಿದ್ಧಲಿಂಗ ದೇವರು. ಶಿಸ್ತು-ಸೌಜನ್ಯ-ವಿದ್ಯೆ-ವಿನಯಗಳ ಸಾತ್ರಿಕ ಮೂರ್ತಿಗಳಾದ ಶ್ರೀ ಸಿದ್ದಲಿಂಗ ದೇವರು ಆಧ್ಯಾತ್ಮ ವಿಶ್ವವಿದ್ಯಾಲಯವಾದ ಶ್ರೀ ಶಿವಯೋಗಮಂದಿರ, ಹುಬ್ಬಳ್ಳಿ ಮೂರುಸಾವಿರಮಠ, ಹಾವೇರಿ ಹುಕ್ಕೇರಿಮಠದಲ್ಲಿದ್ದು ವಚನಸಾಹಿತ್ಯ, ಧರ್ಮಸಂಸ್ಕಾರ, ಆಧ್ಯಾತ್ಮಸಾಧನೆ, ಕನ್ನಡ-ಸಂಸ್ಕೃತ ಭಾಷೆಗಳ ಅನುಭವ ಹೊಂದಿ, ಬೆಂಗಳೂರ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದಲ್ಲಿ ಯೌಗಿಕ ಪದವಿ ಪಡೆದ ಶ್ರೀ ಸಿದ್ಧಲಿಂಗ ದೇವರು ನಾಡಿನ ಉತ್ತಮ ಪ್ರವಚನಕಾರರಲ್ಲಿ ಒಬ್ಬರಾಗಿದ್ದಾರೆ. ಸತತ ಅಭ್ಯಾಸಿಗಳಾಗಿ, ಬರಹಗಾರರೂ ಆಗಿದ್ದಾರೆ. ತರಣ ಸಾಹಿತ್ಯವನ್ನು ಆಳವಾಗಿ ಅಧ್ಯಯನಗೈದ ಶ್ರೀ ಸಿದ್ಧಲಿಂಗ ದೇವರು ರಾವೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಚನ ನೀಡುತ್ತಾ ದುಶ್ಚಟಗಳನ್ನು ಬಿಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತಿದ್ದಾರೆ. ಜನ ಜಾಗೃತಿ ಪಾದಯಾತ್ರೆ ಮಾಡಿ ಜನಮನದಲ್ಲಿ ಸೌಹಾರ್ದಭಾವ ಮೂಡಿಸಿದ್ದಾರೆ. ಗದುಗಿನ ಪ್ರಸ್ತುತ ಜಗದ್ಗುರುಗಳವರ ಆಶೀರ್ವಾದದೊಂದಿಗೆ ಕ್ರಿಯಾಶೀಲ ಯತಿಗಳಾದ ಶ್ರೀ ಸಿದ್ಧಲಿಂಗ ದೇವರ ನಿರಂಜನ ಚರ ಪಟ್ಟಾಧಿಕಾರ ನೆರವೇರಿಸುವ ಸುಯೋಗ ನಾಡಿನ ಭಕ್ತ ಬಂಧುಗಳ ಆಶಯವಾಗಿದೆ. 2023 ಜನೇವರಿ 12 ರಂದು ಆರಂಭಗೊಳ್ಳಲಿರುವ ಯಡೆಯೂರ ಶ್ರೀ ಸಿದ್ಧಲಿಂಗೇಶ್ವರ ಪುರಾಣ ಪ್ರವಚನ 21 ದಿನಗಳವರೆಗೆ ನಡೆಯಲಿದೆ. ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 40ನೇ ವಾರ್ಷಿಕೋತ್ಸವ, ಹಳೆ ವಿದ್ಯಾರ್ಥಿಗಳ ಸಮಾವೇಶ, ಬಸವ ಕುಟೀರದ ಲೋಕಾರ್ಪಣೆ, ನೆರವೇರಲಿದೆ. ಫೆಬ್ರುವರಿ 1, 2 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಹಲವಾರು ಪೂಜ್ಯರು, ರಾಜಕೀಯ. ಧುರೀಣರು, ಸಮಾಜ ಸೇವಕರು, ಕಲಾವಿದರು, ಕಲ್ಯಾಣ ನಾಡಿನ ಭಕ್ತಬಳಗ ಪಾಲ್ಗೊಳ್ಳಲಿದ್ದು 3-2-2023 ರಂದು ಶ್ರೀ ಸಿದ್ಧಲಿಂಗ ದೇವರ. ನಿರಂಜನ ಚರಪಟ್ಟಧಿಕಾರ ನಡೆಯಲಿದೆ. ಈ ಪವಿತ್ರ ಸಮಾರಂಭಕ್ಕೆ ಸಮಸ್ತ ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿ ಬಸವಾದಿ ಶಿವಶರಣರ ಹಾಗೂ ಶ್ರೀ ಸಿದ್ಧಲಿಂಗೇಶನ ಕೃಪೆಗೆ ಪಾತ್ರರಾಗಿರಿ.