About Shree Matha

  • Home
  • About Shree Matha

About Shree Matha Rawoor

ನಮ್ಮ ಶ್ರೀಮಠ ರಾವೂರ, ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನಮಠವೂ ಕಲ್ಯಾಣ ಕರ್ನಾಟಕದ ಶರಣ ಸಂಸ್ಕೃತಿಯ ಪಾವನ, ತಾಳ, ಶ್ರೀಮಠಕ್ಕೆ 5 ಶತಮಾನಗಳ ಭವ್ಯ ಪರಂಪರೆ ಇದೆ. ಗುರು ಬಸವಣ್ಣನವರ ಲಿಂಗಾಯತ ಧರ್ಮದ ವಚನ ಸಾಹಿತ್ಯದ 2ನೇ ಕಾಲಘಟ್ಟವನ್ನು ಮುನ್ನಡೆಸಿದ ಯತಿಕುಲತಿಲಕ' ಯಡೆಯೂರು ಶ್ರೀ ಜಗದ್ಗುರು ತೋಂಟದ ಸಿದ್ದಲಿಂಗೇಶ್ವರರ ತಪೋತಾಣ ನಮ್ಮ ಶ್ರೀಮಠ, ಕರ್ತೃ ಶ್ರೀ ಸಿದ್ದಲಿಂಗೇಶ್ವರರ ನಂತರ 12: ಪೂಜ್ಯರು ಮಠವನ್ನು ಮುನ್ನಡೆಸಿದ್ದಾರೆ. 11ನೇ ಅಧಿಪತಿಗಳಾದ ಶ್ರೀ ಬೋಳಬಸವ ಸ್ವಾಮಿಗಳು ಶಾಖಾಮಠಗಳ ರಕ್ತಕೆ, ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯನ್ನು ತೆಲೆದು ಶ್ರೀಮಠವನ್ನು ಕಲ್ಯಾಣ ಕರ್ನಾಟಕದ ಸಿದ್ಧಗಂಗೆ' ಎಂಬ ಪ್ರಖ್ಯಾತಿಗೆ ಕಾರಕರಾದವರು, ''ಶೂನ್ಯ ಸಂಪಾದನೆಯ ಪರಾಮರ್ಶೆಯ ಕೃತಿ ಪಕ ಉಪಪಶಸ್ತಿ ಬರುವಲ್ಲಿ ಪೇರಣೆಯಾದವರು.

12ನೇ ಅಧಿಪತಿಗಳಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಭಕ್ತಾನುರಾಗಿಗಳು, ಶಿಕ್ಷಣಪ್ರೇಮಿಗಳು, ಪುಸ್ತಕ ಪ್ರಿಯರಾದ ಪರು, 25 ವರ್ಷಗಳವರೆಗೆ ಶ್ರೀಮತವನ್ನು ಮುನ್ನಡೆಸಿ, ಇತಿಹಾಸಕ್ಕೆ ಹೊನ್ನಕಿರೀಟವಾದವರು. ಮೊಜ್ವರ ಲಿಂಗೈ. ನಂತರ ಗದಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಿಯುಕ್ತಿಗೊಂಡವರೆ ನಮ್ಮ ಭರವಸೆಯ ಯುವತಿ ಶ್ರೀ ದೇವರು, ವಿದ್ಯೆ ವಿನಯವನ್ನು ಮೈಗೂಡಿಸಿಕೊಂಡ ಸಾಧಕ ಶೇಷ್ಠರು, ಆಧ್ಯಾತ್ಮ ವಿದ್ಯಾಲಯ ಶ್ರೀ ಶಿವಯೋಗ ಮಂದಿರ, ಹುಬ್ಬಳ್ಳಿ ಮೂರುಸಾವಿರಮಠದಲ್ಲಿದ್ದು ವಚನಸಾಹಿತ್ಯ ಆಧ್ಯಯನ, ಆಧ್ಯಾತ್ಮ ಸಾಧನೆ, ಬೆಂಗಳೂರ ಸ್ವಾಮಿ ವಿವೇಕಾನಂದ ಯೋಗ ವಿದ್ಯಾಲಯದಲ್ಲಿ ನೌಕ ಪದವಿ ಪಡೆದ ಸಿದ್ದಲಿಂಗ ದೇವರು, ಪ್ರತಿಭಾನ್ವಿತ ಪ್ರವಚನಕಾರರಲ್ಲಿ ಒಬ್ಬರು. ಗ್ರಾಮಗಳಲ್ಲಿ ಜನಜಾಗೃತಿಪಾದಯಾತ್ರೆ, ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತು, ಸೌಹಾರ್ದ ಭಾವದಿಂದ ಸಂಸ್ಕಾರಗಳನ್ನು ಬಿತ್ತಿ, ಶ್ರೀದ ಜಾಗೃತಿ ಮೂಡಿಸಿ ಸಾಮಾನ್ಯರ ಸ್ವಾಮಿಗಳಾಗಿ, ಜನಮಾನಸದಲ್ಲಿ ಧನ್ಯತಾಭಾವ ಮೂಡಿಸಿದ್ದಾರೆ. ಕರ್ನಾಟಕದ ಬಹುಭಾಗಗಳಲ್ಲಿ ಪ್ರವಚನಗೈದ ಪೂಜ್ಯರು ಸತಪಾಧ್ಯಾಯಗಳು ಉತ್ತಮ ಬರಹಗಾರರು: ಶರಣ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಉದಾತ್ತ ಚಿಂತಕರು ಶ್ರೀ ಸಿದ್ಧಲಿಂಗ ದೇವರು, ಮುವ | ಕೆ ಮರಾಣ ಮಂಗಲ, 2ರಂದು ಬೆಳಗ್ಗೆ ಹಿರಿಯ ವಿದ್ಯಾರ್ಥಿಗಳ ಸಮಾವೇಶ, ಧಾರ್ಮಿಕಗೋಷ್ಠಿ ವಿಶೇಷ ಕಾರ್ಯಕ್ರಮ, ದಿನಾಂಕ 03-02-2013 ರಂದು ಶ್ರೀ ಸಿದ್ಧಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಸಮಯ, ಸೇವಾದೀಕ್ಷಾ ಸಮಾರಂಭ ನೆರವೇರಲಿದೆ. ನಾಡಿನ ಪರಮ ಪೂಜ್ಯರುಗಳು, ಗಣ್ಯಮಾನ್ಯರು, ರಾಜಕೀಯ ಧುರೀಣರು, ಕವಿ ಕಲಾವಿದರು, ಕಲ್ಯಾಣ ಕರ್ನಾಟಕದ ಶರಣ-ಶರಣೆಯರು ಪವಿತ್ರ ಕಾರ್ಯಕ್ರಮಕ್ಕೆ ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿ, ಶ್ರೀ ಗುರುವಿನ ಕೃಪೆಗೆ ಪಾರ್ತರಾಗಿ,

ಸಂಸ್ಕೃತಿಯ ಭವ್ಯ ಪ್ರತೀಕ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಠಗಳು ಬಹುಮುಖ್ಯ ಪಾತ್ರವನ್ನು ವಹಿಸಿವೆ. ಈ ಮಠಗಳು ಧಾರ್ಮಿಕ, ಆಧ್ಯಾತ್ಮದ ಜೊತೆಗೆ ಶೈಕ್ಷಣಿಕ ರಂಗದಲ್ಲೂ ತಮ್ಮದೇ ಆದ ಕಾಣಿಕೆ ನೀಡುತ್ತ ಬಂದಿವೆ. ಅಂತೆಯೇ ಈ ಮಠಗಳು ಪ್ರಾಚೀನ ಕಾಲದಲ್ಲಿ ಶಿಕ್ಷಣ ಕೇಂದ್ರಗಳೂ ಆಗಿದ್ದವು. 'ಮಠ' ಎಂಬ ಶಬ್ದದ ಅರ್ಥವೇ ವಿದ್ಯಾಪ್ರಧಾನ ಕೇಂದ್ರ ಎಂದು ಸೂಚಿಸುತ್ತದೆ. ಅಲ್ಲಿ ವೇದ ಉಪನಿಷತ್ತು, ಷಡರ್ಶನಗಳು, ಕಾವ್ಯ, ಛಂದಸ್ಸು ನಿರುಕ್ತ ಮೊದಲಾದವುಗಳು ಬೋಧಿಸಲ್ಪಡುತ್ತಿದ್ದವು. ಪ್ರಾಚೀನ ಕಾಲದಲ್ಲಿ ಋಷ್ಯಾಶ್ರಮಗಳು, ಬೌದ್ಧ ವಿಹಾರಗಳು, ಜೈನ ಕ್ಷೇತ್ರಗಳು ಘಟಿಕಾಸ್ಥಾನಗಳಾಗಿದ್ದಂತೆ; ನಂತರದ ದಿನಗಳಲ್ಲಿ ಅಗ್ರಹಾರಗಳು, ವೀರಶೈವ ಮಠಗಳು ವಿದ್ಯಾದಾನಗೈಯುತ್ತ ಪ್ರಾಚೀನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಬಂದವು. ಕರ್ನಾಟಕದ ಅನೇಕ ಮಠಗಳು ಈ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿರುವುದನ್ನು ನಾವು ನೋಡಬಹುದಾಗಿದೆ. ಅದೇ ಸಾಲಿನಲ್ಲಿ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠವೂ ಬರುತ್ತದೆ.

ಗುಲಬರ್ಗಾ ಜಿಲ್ಲೆಯ ತಾಲೂಕು ಕೇಂದ್ರ ಚಿತ್ತಾಪೂರದಿಂದ ಕೇವಲ ೧೦ ಕಿ.ಮೀ. ದೂರದಲ್ಲಿರುವ ರಾವೂರು ಗ್ರಾಮ ಪ್ರಾಚೀನ ಕಾಲದಿಂದಲೂ ಬಹು ಪ್ರಸಿದ್ಧಿಯನ್ನು ಹೊಂದಿದೆ. ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಕೆಲವೊಂದು ಶಾಸನಗಳಲ್ಲಿ ರಾವೂರಿನ ಉಲ್ಲೇಖಗಳು ದೊರೆಯುತ್ತವೆ. ಪ್ರಾಚೀನ ಕಾಲದ ರಾಮಲಿಂಗೇಶ್ವರ ದೇವಾಲಯ, ವೆಂಕಟೇಶ್ವರ ದೇವಾಲಯ, ಈಶ್ವರ ದೇವಾಲಯಗಳಲ್ಲದೇ ಅನೇಕ ದೇಗುಲಗಳು ಈ ಗ್ರಾಮದುದ್ದಕ್ಕೂ ಕಂಡುಬರುತ್ತವೆ. ಇವುಗಳಲ್ಲಿ ಹೆಚ್ಚಿನವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ವಾಸ್ತುರಚನೆಗಳಾಗಿವೆ. ಇಲ್ಲಿಯ ಜನರ ಮುಖ್ಯ ಕಸುಬು ಒಕ್ಕಲುತನ ಮತ್ತು ಕಲ್ಲಿನ ಗಣಿಗಾಗಿಕೆ. ಇಲ್ಲಿನ ಕಲ್ಲಿಗೆ ರಾಜ್ಯವಲ್ಲದೆ ರಾಷ್ಟ್ರದೆಲ್ಲೆಡೆ ಬಹು ಬೇಡಿಕೆಯಿದೆ. 'ಶಹಾಬಾದ ಕಲ್ಲು' ಎಂದೇ ಇದು ಪ್ರಸಿದ್ಧಿಯನ್ನು ಪಡೆದಿದೆ. ಇಂಥ ಒಂದು ಕಲ್ಲುನಾಡಿನ ಪ್ರದೇಶದಲ್ಲಿ ಹೂವಾಗಿ ಅರಳಿದೆ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ, ಈ ಮಠ ಸುಮಾರು ಮೂರು ಶತಮಾನಗಳಿಗೂ ಪುರಾತನವಾದುದು.

ಶ್ರೀ ಸಿದ್ಧಲಿಂಗೇಶ್ವರ ಮಠದ ಹಿನ್ನೆಲೆ ತೋಂಟದ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರೊಡಗೂಡಿ ಆಧ್ಯಾತ್ಮದ ಬಗ್ಗೆ ಉಪದೇಶಿಸುತ್ತ ನಾಡಿನ ಅನೇಕ ಕಡೆಗಳಲ್ಲಿ ಸಂಚಾರ ಕೈಗೊಂಡ ಸಂದರ್ಭದಲ್ಲಿ ಆನೇಕ ಮಠಗಳು ಹುಟ್ಟಿಕೊಂಡವು ಎಂಬ ಪ್ರತೀತಿ ಇದೆ. ಇದೇ ಅವಧಿಯಲ್ಲಿ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ ನಿರ್ಮಾಣಗೊಂಡಿತೆಂದು ಹೇಳಲಾಗುತ್ತದೆ. ಈವರೆಗೆ ಶ್ರೀಮಠದಲ್ಲಿ ೧೨ ಜನ ಪೂಜ್ಯರು ಶ್ರೀಮಠದ ಪೀಠವನ್ನಲಂಕರಿಸಿದ್ದಾರೆ. ಹೊನಗುಂಟಿ, ಯನಗುಂಟಿ, ನಾಲವಾರ, ನರಬೋಳಿ, ಬಡಗಿ, ಸಾತನೂರ, ಲಾಡ್ಡಾಪೂರ ಹೀಗೆ ಈ ಭಾಗದ ಬೇರೆ ಬೇರೆ ಕಡೆಗಳಲ್ಲಿ ಒಟ್ಟು ೧೬ ಶಾಖಾ ಮಠಗಳಿವೆ, ಆಂಧ್ರಪ್ರದೇಶದ ಆದೋನಿಯ ಮಂಡಿಗಿರಿ ಕಲ್ಲುಮಠವೂ ಸಹ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠದ ವ್ಯಾಪ್ತಿಯಲ್ಲಿ ಬರುವುದು, ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು* ಈ ಎರಡೂ ಮಠಗಳ ಅಧಿಪತಿಗಳು, ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಈ ಹಿಂದಿನ ಧಾರವಾಡ ಜಿಲ್ಲೆಯ ಕೋಟಬಾಗಿ ಗ್ರಾಮದ ಜಂಗಮ ಮನೆತನವೊಂದರಲ್ಲಿ ೧೯೦೭ರ ಜನೆವರಿ ೨೯ರಂದು ಜನಿಸಿದರು. ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಸ್ಥಾಪಿತವಾದ ಶಿವಯೋಗ ಮಂದಿರದಲ್ಲಿ ಪೂಜ್ಯರು ಸುಮಾರು ೧೬ ವರ್ಷಗಳಕಾಲ ಕನ್ನಡ, ಸಂಸ್ಕೃತ ಮತ್ತು ಯೋಗಾಭ್ಯಾಸವನ್ನು ಕೈಗೊಂಡರು. ಸಂಸ್ಕೃತದ ಉಚ್ಛ ಶಿಕ್ಷಣಕ್ಕಾಗಿ ಕಾಶಿ ವಿದ್ಯಾಪೀಠದಲ್ಲಿ ೧೨ ವರ್ಷಗಳಕಾಲ ಅಧ್ಯಯನ ಮಾಡಿ 'ವ್ಯಾಕರಣ ಆಚಾರ್ಯ' ಪದವಿಯನ್ನು ಪಡೆದರು. ಪ್ರೌಢರಾಯನ ಕಾವ್ಯ, ಗುರುರಾಜ ಚಾರಿತ್ರ, ಲಿಂಗಲೀಲಾ ವಿಲಾಸ ಚಾರಿತ್ರ, ಶೂನ್ಯ ಸಂಪಾದನೆ ಮೊದಲಾದ ಗ್ರಂಥಗಳ ಸಂಪಾದನೆ, ಸಂಸ್ಕರಣ ಮಾಡುವಲ್ಲಿ ಮತ್ತು ಸ್ವತಃ ಹಸ್ತಪ್ರತಿ ಮಾಡಿ ವೀರಶೈವ ಸಾಹಿತ್ಯ ಅಭಿವೃದ್ಧಿಗೆ ಕಾರಣರಾದರು. ೧೯೪೫ರಲ್ಲಿ ಆದೋನಿಯ ಮಂಡಿಗಿರಿ ಕಲ್ಲುಮಠದ ಅಧಿಪತಿಗಳಾಗಿ, ೧೯೫೧ರಲ್ಲಿ ರಾವೂರಿನ ಶ್ರೀ ಸಿದ್ದಲಿಂಗೇಶ್ವರ ಮಠದ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಅಲ್ಲದೇ ಈ ಎರಡೂ ಮಠಗಳ ಜೀರ್ಣೋದ್ಧಾರ ಕೈಗೊಂಡು ಊರ್ಜಿತಾವಸ್ಥೆಗೆ ಕೊಂಡೊಯ್ದರು. ೧೯೬೦ರ ದಶಕದಲ್ಲಿ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಈಗಿರುವ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳನ್ನು ತಮ್ಮ ಶಿಷ್ಯರನ್ನಾಗಿ ನೇಮಿಸಿಕೊಳ್ಳುತ್ತಾರೆ. ಸದ್ಯದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ರಾವೂರಿನಲ್ಲಾದರೆ, ಹೈಸ್ಕೂಲ್ ಶಿಕ್ಷಣ ಆದೋನಿಯಲ್ಲಾಯಿತು. ಮುಂದೆ ಹುಬ್ಬಳ್ಳಿಯಲ್ಲಿ ಪದವಿ ಶಿಕ್ಷಣ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದೇ ಅವಧಿಯಲ್ಲಿ (೧೯೮೩) ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆದೋನಿಯ ಮಂಡಿಗಿರಿ ಕಲ್ಲುಮಠದ ಉತ್ತರಾಧಿಕಾರಿಯಾಗಿ ವಿಧಿವತ್ತಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ೧೯೮೪ರಲ್ಲಿ ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷಕಾಲ ಇದ್ದುಕೊಂಡು ಸಂಸ್ಕೃತ ಅಧ್ಯಯನವನ್ನು ಪೂರ್ಣಗೊಳಿಸುತ್ತಾರೆ. ಹೀಗೆ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳು ಬಹು ಪದ್ಧತಿಯ ಪ್ರೌಢ ವಿದ್ಯೆಯನ್ನು ಮುಗಿಸಿಬಂದ ಮೇಲೆ ಮಠದ ಶ್ರೇಯಸ್ಸಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ.





Download Shree Matha History

Download
Gallery Image
Gallery Image
Gallery Image
Gallery Image